ಮುಚ್ಚಿ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ

ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ, ಇದು ವಿಶ್ವದಾದ್ಯಂತ ವಷಕ್ಕೆ 8 ದಶಲಕ್ಷಕ್ಕೂ ಹೆಚ್ಚೂ ಜನರನ್ನು ಕೊಲ್ಲುತ್ತಿದೆ ಹಾಗೂ ಪ್ರತ್ಯಕ್ಷ ಧೂಮಪಾನ ಮಾಡುವುದರಿಂದ ಸುಮಾರು ದಶಲಕ್ಷಗಳಷ್ಟು ಜನರು ಸಾವಿಗೀಡಾದರೆ ಧೂಮಪಾನ ಮಾಡದವರು ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ 1.2 ದಶಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ವಿಶ್ವಾದಾದ್ಯಂತ ಇರುವ 1.1 ಶತಕೋಟಿ ಧೂಮಪಾನಿಗಳಲ್ಲಿ ಸುಮಾರು 80% ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ತಂಬಾಕು ಸಂಬಂಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನುಮಾಡುವ ಬದಲಾಗಿ ತಂಬಾಕಿಗೆ ಖಚ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ.

          ಭಾರತ ಸರಕಾರ 2007-08ರಲ್ಲಿ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು (ಎನ್.ಟಿ.ಸಿ.ಪಿ) ಪ್ರಾರಂಬಿಸಿತು. ವಿಶ್ವ ವಯಸ್ಕರ ತಂಬಾಕು ಸಮೀಕ್ಷೆ (ಜಿ.ಎ.ಟಿ.ಎಸ್) 2009-10ರಂತೆ ತಂಬಾಕು ಬಳಕೆಯ ಪ್ರಮಾಣಯನ್ನು ಸೂಚಿಸುತ್ತದೆ. 12ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ತಂಬಾಕು ಬಳಕೆಯನ್ನು 5% ರಷ್ಟು ಕಡಿಮೆ ಮಾಡುವ ಗುರಿಯನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಹಾಕಿಕೊಳ್ಳಲಾಗಿತ್ತು. ಜಿ.ಎ.ಟಿ.ಎಸ್ 2ನೇ ಸಮೀಕ್ಷೆಯ ಪ್ರಕಾರ ತಂಬಾಕು ಬಳಸುವವರ ಸಂಖ್ಯೆ ಸುಮಾರು 81 ಲಕ್ಷ (8.1 ದಶ ಲಕ್ಷ ) ಕಡಿಮೆಯಾಗಿದೆ. 

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉದ್ದೇಶಗಳು:

  1. ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
  2. ತಂಬಾಕು ಉತ್ಪನ್ನಗಳ ಸೇವನೆ, ಉತ್ಪಾದನೆ ಮತ್ತು ಪೂರೈಕೆಯನ್ನು ಕಡಿಮೆ ಮಾಡುವುದು.
  3. ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ(ಕೋಟ್ಪಾ)2003 ರನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು.
  4. ತಂಬಾಕು ಬಳಕೆಯನ್ನು ತ್ಯಜಿಸಲು ಸೇವೆಯನ್ನು ಒದಗಿಸುವುದು.
  5. ತಂಬಾಕು ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ವಿಶ್ವ ಆಯೋಗ್ಯ ಸಂಸ್ಥೆಯ ಎಫ್.ಸಿ.ಟಿ.ಸಿಯ ಕಾರ್ಯತಂತ್ರಗಳನ್ನು ಅನುಷ್ಠಾನ ಮಾಡುವುದು.

ಎನ್‌ಟಿಸಿಪಿಯ ರಚನೆ:

                                                                                       

ಎನ್‌ಟಿಸಿಪಿಯನ್ನು ಮೂರು ಹಂತಗಳಲ್ಲಿ ಅನುಷ್ಠಾನ ಮಾಡಲಾಗಿದೆ, ಅಂದರೆ

  • ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶ (ಎನ್‌ಟಿಸಿಸಿ)
  • ರಾಜ್ಯ ಮಟ್ಟದಲ್ಲಿ ರಾಜ್ಯ ತಂಬಾಕು ನಿಯಂತ್ರಣ ಕೋಶ (ಎಸ್‌ಟಿಸಿಸಿ) ಮತ್ತು
  • ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ (ಡಿಟಿಸಿಸಿ).

ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶ (ಎನ್‌ಟಿಸಿಸಿ):

ಭಾತರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿಯಂತ್ರಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶವನ್ನು ರಚಿಸಲಾಗಿದೆ. ನೀತಿ ರೂಪಿಸುವಿಕೆ, ಯೋಜನೆ ತಯಾರಿ ಮತ್ತು ತಂಬಾಕು ನಿಯಂತ್ರಣ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ಇದರ ಜವಾಬ್ದಾರಿಯಾಗಿರುತ್ತದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಜಂಟಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯದಲ್ಲಿ ಗುರುತಿಸಲ್ಪಟ್ಟ ಅಧಿಕಾರಿಗಳಿಂದ ತಾಂತ್ರಿಕ ನೆರವು ನೀಡಲಾಗುತ್ತದೆ.

    ಪ್ರಮುಖ ಚಟುವಟಿಕೆಗಳು:

  • ಸಮೂಹ ಮಾಧ್ಯಮಗಳ (ಮಾಸ್‌ ಮೀಡಿಯಾ) ಮುಖಾಂತರ ಸಾರ್ವಜನಿಕರಲ್ಲಿಅರಿವು ಮೂಡಿಸಿ ನಡವಳಿಕೆಯನ್ನು ಬದಲಿಸುವುದು
  • ತಂಬಾಕು ಉತ್ಪನ್ನಗಳ ಪರೀಕ್ಷೆಯ ಪ್ರಯೋಗಾಲಯಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡುವುದು.
  • ತಂಬಾಕುವಿಗೆ ಪರ್ಯಾಯ ಬೆಳೆ ಹಾಗು ಪರ್ಯಾಯ ಜೀವನೋಪಾಯಕ್ಕೆ ಮಾರ್ಗವನ್ನು, ಇತರೆ ಇಲಾಖೆಗಳ ಸಹಯೋಗದೊಂದಿಗೆ ತರಬೇತಿ ಹಾಗು ಪ್ರಯೋಗಗಳನ್ನು ನಡೆಸಿ ರೂಪಿಸುವುದು.
  • ಕಣ್ಗಾವಲು ಸೇರಿದಂತೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ
  • ಎನ್.ಹೆಚ್.ಎಂ. ನ ಚೌಕಟ್ಟನ್ನು ಮೀರದೆ ಇತರೆ ಆರೋಗ್ಯ-ಆರೈಕೆ ಪೂರೈಸುವ ಮಾರ್ಗಗಳೊಡನೆ ಸಮಗ್ರಗೊಳಿಸುವುದು

 ರಾಜ್ಯ ತಂಬಾಕು ನಿಯಂತ್ರಣ ಕೋಶ (ಎಸ್‌ಟಿಸಿಸಿ):

ತಂಬಾಕು-ವಿರೋಧಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಹಾಗೂ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಸಂಘಟಿಸಲು ರಾಜ್ಯ ಮಟ್ಟದಲ್ಲಿ ರಾಜ್ಯ ತಂಬಾಕು ನಿಯಂತ್ರಣ ಕೋಶವಿದೆ. ತಂಬಾಕು ನಿಯಂತ್ರಣ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ ತಂಬಾಕು ನಿಯಂತ್ರಣ ಕೋಶಗಳನ್ನು ಸಮರ್ಪಿಸಲಾಗಿದೆ.

ಪ್ರಮುಖ ಚಟುವಟಿಕೆಗಳು:

  • ರಾಜ್ಯ ಮಟ್ಟದ ಕಾರ್ಯಾಗಾರಗಳು
  • ಎನ್.ಟಿ.ಸಿ.ಪಿ ಅಡಿಯಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ತರಬೇತಿದಾರರ ತರಬೇತಿಯನ್ನು ನೀಡುವದು.
  • ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಿಗೆ ರಿಫ್ರೆಷರ್‌ ಟ್ರೈನಿಂಗ್‌ಗಳನ್ನು ಹಮ್ಮಿಕೊಳ್ಳುವುದು
  • ವ್ಯಸನಮುಕ್ತಿಯ ಕುರಿತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ.
  • ಕಾನೂನು ಅನುಷ್ಠಾನಾಧಿಕಾರಿಗಳ ತರಬೇತಿ / ಅರಿವು ಮೂಡಿಸುವುದು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ (ಡಿಟಿಸಿಸಿ):

ತಂಬಾಕು ವಿರೋಧಿ ಕಾನೂನುಗಳ ಅನುಷ್ಠಾನ ಹಾಗೂ ತಂಬಾಕು ಬಳಕೆಯ ದುಷ್ಪರಿಣಾಮಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಸಂಘದ ಅಡಿಯಲ್ಲಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕೋಶವನ್ನು (ಡಿಟಿಸಿಸಿ) ಸ್ಥಾಪಿಸಲಾಗಿದೆ . 

ಪ್ರಮುಖ ಚಟುವಟಿಕೆಗಳು:

  • ಆರೋಗ್ಯ ಹಾಗೂ ಸಮಾಜ ಕಾರ್ಯಕರ್ತರ, ಸರ್ಕಾರೇತರ ಸಂಸ್ಥೆಗಳ ಹಾಗೂ ಅನುಷ್ಠಾನಾಧಿಕಾರಿಗಳ ತರಬೇತಿ.
  • ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳು.
  • ಶಾಲಾ ಕಾರ್ಯಕ್ರಮಗಳು.
  • ತಂಬಾಕು ನಿಯಂತ್ರಣ ಕಾನೂನುಗಳ ಮೇಲ್ವಿಚಾರಣೆ.
  • ತಂಬಾಕು ವ್ಯಸನಮುಕ್ತಿ ಕೆಂದ್ರದ ಮೂಲಕ ತಂಬಾಕು ದುಷ್ಚಟದಿಂದ ಹೊರಗೆ ಬರಲು ಔಷಧ ವಿತರಣೆ
  • ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳೊಂದಿಗೆ ಸಮನ್ವಯ .

ತರಬೇತಿ:

ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯು ಕೋಶದ ಪ್ರಮುಖ ಚಟುವಟಿಕೆಯಾಗಿದೆ. DTCC ಒಟ್ಟು 5 ತರಬೇತಿಗಳನ್ನು ಪ್ರತಿ ವರ್ಷ ಆಯೋಜಿಸುತ್ತದೆ.

ಪಂಚಾಯತ್ ರಾಜ್ ಪ್ರತಿನಿಧಿಗಳು / ಪೊಲೀಸ್ ಸಿಬ್ಬಂದಿ / ಶಿಕ್ಷಕರು / ಸಾರಿಗೆ ಸಿಬ್ಬಂದಿ / ಎನ್ ಜಿ ಓ ಸಿಬ್ಬಂದಿ / ಇತರ ಮಧ್ಯಸ್ಥಗಾರರ ತರಬೇತಿ:

ದಿನಾಂಕ: 21-11-2020 ರಂದು ಡಿಟಿಸಿಸಿಯು ಸರಕಾರಿ ಬಾಲಕರ ಶಾಲೆ ಗಾಂಧಿ ಚೌಕ್, ವಿಜಯಪುರ ಇಲ್ಲಿ ಜಿಲ್ಲೆಯ 7 ವಲಯಗಳ ಆಯ್ದ 54 ಮುಖ್ಯೋಪಾಧ್ಯಾಯರಿಗೆ ಎನ್‌ಟಿಸಿಪಿ ಕಾರ್ಯಕ್ರಮ, ತಂಬಾಕು ಬಳಕೆಯ ದುಷ್ಪರಿಣಾಮಗಳು ಮತ್ತು ಕೋಟ್ಪಾ 2003 ಕುರಿತು  ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಆರೋಗ್ಯ ಕಾರ್ಯಕರ್ತರುಗಳ ತರಬೇತಿ:

ದಿನಾಂಕ: 24-11-2020 ರಂದು  ಡಿಟಿಸಿಸಿಯು ಟಿಎಚ್‌ಒ ಇಂಡಿ ತರಬೇತಿ ಸಭಾಂಗಣದಲ್ಲಿ  ಒಟ್ಟು 48 ಹಿರಿಯ / ಕಿರಿಯ ಆರೋಗ್ಯ ಸಹಾಯಕರು ಮತ್ತು ತಾಲ್ಲೂಕಿನ ಆಶಾ ಫೆಸಿಲಿಟೇಟರ್‌ಗಳಿಗೆ ಎನ್‌ಟಿಸಿಪಿ ಕಾರ್ಯಕ್ರಮ, ತಂಬಾಕು ಬಳಕೆಯ ದುಷ್ಪರಿಣಾಮಗಳು ಮತ್ತು ಕೋಟ್ಪಾ 2003 ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಪಾಲುದಾರರುಗಳ ತರಬೇತಿ:

ದಿನಾಂಕ: 11-12-2020 ರಂದು  ಡಿಟಿಸಿಸಿಯು ಸರಕಾರಿ ಬಾಲಕರ ಪದವಿಪೂರ್ವ ಮಾಹಾವಿದ್ಯಾಲಯ ಗಾಂಧಿ ಚೌಕ್, ವಿಜಯಪುರ ಇಲ್ಲಿ ಒಟ್ಟು 55 ಎನ್ಎಸ್ಎಸ್ ಸಂಯೋಜಕರು ಹಾಗೂ NGO ವ್ಯಕ್ತಿಗಳಿಗೆ ಎನ್‌ಟಿಸಿಪಿ ಕಾರ್ಯಕ್ರಮ, ತಂಬಾಕು ಬಳಕೆಯ ದುಷ್ಪರಿಣಾಮಗಳು ಮತ್ತು ಕೋಟ್ಪಾ 2003 ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾನೂನು ಅನುಷ್ಠಾನ ಅಧಿಕಾರಿಗಳ ತರಬೇತಿ:

ದಿನಾಂಕ: 14-12-2020 ರಂದು  ಡಿಟಿಸಿಸಿಯು ತಾಲೂಕ ಪಂಚಾಯತ್ ಸಭಾಂಗಣ, ಬ ಬಾಗೇವಾಢಿ, ಇಲ್ಲಿ ಒಟ್ಟು 42 ತಾಲೂಕ ತನಿಖಾ ತಂಡದ ಸದಸ್ಯರುಗಳು ಹಾಗೂ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ಎನ್‌ಟಿಸಿಪಿ ಕಾರ್ಯಕ್ರಮ, ತಂಬಾಕು ಬಳಕೆಯ ದುಷ್ಪರಿಣಾಮಗಳು ಮತ್ತು ಕೋಟ್ಪಾ 2003 ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಇತರೆ ತರಬೇತಿ:

ದಿನಾಂಕ: 20-11-2020 ರಂದು  ಡಿಟಿಸಿಸಿಯು ಸ್ತ್ರೀ ಶಕ್ತಿ ಭವನ, ಜಿಲ್ಲಾ ಪಂಚಾಯತ್ ಹತ್ತಿರ ವಿಜಯಪುರ ಇಲ್ಲಿ ವಿಜಯಪುರ ನಗರದ  ಒಟ್ಟು 53 ಸ್ವಸಹಾಯ ಗುಂಪು ಮುಖಂಡರಿಗೆ ಎನ್‌ಟಿಸಿಪಿ ಕಾರ್ಯಕ್ರಮ, ತಂಬಾಕು ಬಳಕೆಯ ದುಷ್ಪರಿಣಾಮಗಳು ಮತ್ತು ಕೋಟ್ಪಾ 2003 ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳು:

ಆರೋಗ್ಯ ಕಾರ್ಯಕ್ರಮಗಳಲ್ಲಿ ಐಇಸಿ ಗಳ  ಮುಖ್ಯ  ಉದ್ದೇಶವು ಅರಿವು ಮೂಡಿಸುವಿಕೆ, ವರ್ತನೆಗಳನ್ನು ಬದಲಿಸುವದು ಮತ್ತು ನಿರ್ದಿಷ್ಟ ನಡವಳಿಕೆಗಳಲ್ಲಿ ಬದಲಾವಣೆಯನ್ನು ತರುವದನ್ನು ಹೆಚ್ಚಿಸುವದಾಗಿದೆ. ಇದನ್ನು ಜಾಗೃತಿ ಮೂಡಿಸಲು ಬಳಸಲಾಗುತ್ತದೆ, ಸಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸಲು, ಸಂವಹನ ತಂತ್ರಗಳನ್ನು ಅಭಿವೃದ್ಧಿಪಡಿಸಲು, ವ್ಯಕ್ತಿಗಳು, ಸಮುದಾಯಗಳು ಮತ್ತು ಸಮಾಜಗಳೊಂದಿಗೆ ಕೆಲಸ ಮಾಡುವ ಪ್ರಕ್ರಿಯೆಯನ್ನು ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ. ಈ ಬದಲಾವಣೆಯನ್ನು ತರುವಲ್ಲಿ ಐಇಸಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಐಇಸಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅತ್ಯಗತ್ಯ ಅಂಶವಾಗಿದೆ, ಇದು ಜ್ಞಾನ ಮತ್ತು ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಆರೋಗ್ಯ ಉತ್ತೇಜನದ ಪ್ರಮುಖ ಅಂಶವಾಗಿದೆ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಎಲ್ಲ ರೀತಿಯ ಪ್ರೇಕ್ಷಕರನ್ನು ತಲುಪಲು ವಿಭಿನ್ನ ರೀತಿಯ ಮಾಧ್ಯಮ ವಿಧಾನಗಳನ್ನು ಬಳಸುತ್ತಿದೆ. ಸಾರ್ವಜನಿಕರಿಗೆ ತಂಬಾಕು ಬಳಕೆಯ ಹಾನಿಕಾರಕ ಪರಿಣಾಮಗಳನ್ನು ಮತ್ತು ಕೊಟ್ಪಾ 2003ರ ಕಾಯ್ದೆಯ ನಿಯಮಗಳನ್ನು ಗೋಡೆಯ ಬರಹಗಳು , ಮೇಳಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅಂಗಡಿಗಳು, ನಾಮಫಲಕಗಳು, ಕರಪತ್ರಗಳು, ಭಿತ್ತಿಪತ್ರಗಳು, ಫ್ಲಿಪ್‌ಚಾರ್ಟ್, ಬೀದಿ ನಾಟಕಗಳು ಮತ್ತು ಸ್ಥಳೀಯ ರೇಡಿಯೋ ಜಿಂಗಲ್ಸ್ ಇತ್ಯಾದಿಗಳ ಮುಖಾಂತರ ತಿಳಿಸಲಾಗುತ್ತಿದೆ.

ವಿಶ್ವ ತಂಬಾಕು ರಹಿತ ದಿನ: 

ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. ತಂಬಾಕು ಬಳಕೆಯ ಅಪಾಯಗಳು ಮತ್ತು ನಾವು ಜಗತ್ತನ್ನು ತಂಬಾಕು ಮುಕ್ತಗೊಳಿಸುವುದು ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಗುರಿಯಾಗಿದೆ . ಈ ದಿನ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು, ತಂಬಾಕುವಿನ ಹಾನಿಕಾರಕ ಮತ್ತು ಮಾರಕ ಪರಿಣಾಮಗಳು, ಪರೋಕ್ಷ ಧೂಮಪಾನ ಮತ್ತು ತಂಬಾಕು ನಿಯಂತ್ರಣ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನಗಳನ್ನು ಆಯೋಜಿಸುತ್ತದೆ. 

ಈ ಅಭಿಯಾನದ ಮುಖ್ಯ ಉದ್ದೇಶವು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ, ಅಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ಮತ್ತು ಇನ್ನೂ ಅನೇಕ ಭಯಾನಕ ರೋಗಗಳನ್ನು ಈ ತಂಬಾಕು ಉಂಟುಮಾಡುವದೆಂದು ಜಾಗೃತಿ ಮೂಡಿಸುವುದಾಗಿದೆ. ಈ ‘ವಿಶ್ವ ತಂಬಾಕು ದಿನದಂದು’ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗಿದೆ ಮತ್ತು ಸಾಮೂಹಿಕ ಐಇಸಿ ಅಭಿಯಾನಗಳಾದ ಜಾಥಾಗಳು, ಪೋಸ್ಟರ್‌ಗಳು ಮತ್ತು ಕರಪತ್ರಗಳ ವಿತರಣೆ , ರೇಡಿಯೋ ಜಿಂಗಲ್ಸ್, ತಂಬಾಕು ದುಷ್ಪರಿಣಾಮಗಳು, ಕೋಟ್ಪಾ 2003 ಮತ್ತು ಟಿಸಿಸಿ ಸೇವೆಗಳ ಕುರಿತು ಆಟೋ ರಿಕ್ಷಾ ಪ್ರಕಟಣೆ ಇತ್ಯಾದಿಗಳನ್ನು ರಾಜ್ಯ ತಂಬಾಕು ವಿರೋಧಿ ಕೋಶದ ಮಾರ್ಗಸೂಚಿಗಳ ಪ್ರಕಾರ  ಸಾರ್ವಜನಿಕರಿಗೆ ತಿಳಿಸಲು  ನಿಯಮಿತವಾಗಿ ನಡೆಸಲಾಗಿದೆ.

ಶಾಲಾ ಕಾರ್ಯಕ್ರಮಗಳು :

 ಜಿಲ್ಲಾ ತಂಬಾಕು ನಿಯಂತ್ರಣ ಕೋಶವು, ಯುವಕರು ಮತ್ತು ಹದಿಹರೆಯದವರಿಗೆ ತಿಳುವಳಿಕೆಯುಳ್ಳ ಆಯ್ಕೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ತಂಬಾಕು ಸೇವನೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಜ್ಞಾನ, ವರ್ತನೆ ಮತ್ತು ಕೌಶಲ್ಯಗಳನ್ನು ಪಡೆಯುವಂತೆ ಸಹಾಯ ಮಾಡಲು  ನಿಯಮಿತವಾಗಿ ಶಾಲಾ ಜಾಗೃತಿ ಕಾರ್ಯಕ್ರಮಗಳು ನಡೆಸುತ್ತದೆ. ಇದು ತಂಬಾಕು ಮುಕ್ತ ವಾತಾವರಣವನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ, ಅದರಲ್ಲಿ ಅವರು ಕಲಿಯಬಹುದು ಮತ್ತು ಬದುಕಬಹುದು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಸಂವೇದನಾಶೀಲಗೊಳಿಸುವುದು ಮತ್ತು ನಂತರದ ಹಂತದಲ್ಲಿ ಅದೇ ಸಂದೇಶವನ್ನು ಬಲಪಡಿಸುವುದು ಅತೀ ಮುಖ್ಯವಾಗಿದೆ.

ಡಿಟಿಸಿಸಿ (ಜಿಲ್ಲಾ ತಂಬಾಕು ನಿಯಂತ್ರಣ ಕೋಶ) ಜಿಲ್ಲೆಯ ಶಾಲೆಗಳು ಮತ್ತು ಕಾಲೇಜುಗಳ ಮ್ಯಾಪಿಂಗ್ ಮಾಡುತ್ತದೆ. ಅದರಂತೆ, ಡಿಟಿಸಿಸಿ ತಂಡ ಡಿಡಿಪಿಐ ಮತ್ತು ಡಿಡಿಪಿಯುನಿಂದ ಅನುಮೋದನೆ ಪಡೆಯುವ ಮೂಲಕ ಶಾಲಾ ಕಾರ್ಯಕ್ರಮಕ್ಕಾಗಿ ತ್ರೈಮಾಸಿಕ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸುತ್ತದೆ ಹಾಗೂ ಪದವಿ ಪೂರ್ವ ಕಾಲೇಜುಗಳು ಈ ಶಾಲಾ ಕಾರ್ಯಕ್ರಮದಡಿ ಒಳಗೊಂಡಿರುತ್ತವೆ. ಸಂಕ್ಷಿಪ್ತವಾದ ವಿವರಣೆಯ ಜೊತೆಗೆ ವಿಧ್ಯಾರ್ಥಿಗಳೊಂದಿಗೆ ಚರ್ಚೆಯನ್ನು ನಡೆಸಲಾಗುವದು ಹಾಗೂ ವಿಧ್ಯಾರ್ಥಿಗಳನ್ನು ಚಿತ್ರಕಲಾ ಸ್ಪರ್ಧೆ/ ನಿಬಂಧ ಸ್ಪರ್ಧೆ / ಡಿಬೇಟ್ಸ್ / ಅಲಂಕಾರಿಕ ಉಡುಗೆ / ಸ್ಕಿಟ್ಸ್ ಇತ್ಯಾದಿಗಳಲ್ಲಿ ಭಾಗವಹಿಸುವಂತೆ ತಿಳಿಸಿ ಸದರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು, ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ನೀಡಲಾಗುವುದು. 2019-20 ರಿಂದ ಜನೇವರಿ 2021 ರವರೆಗೆ ಶಾಲಾ ಕಾರ್ಯಕ್ರಮದಡಿ ಒಟ್ಟು 14,517 ವಿಧ್ಯಾರ್ಥಿಗಳೊಂದಿಗೆ 165 ಶಾಲಾ/ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ 81 ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಘೋಷಿಸಲಾಗಿದೆ.

ಹಳದಿ ರೇಖೆಯ ಅಭಿಯಾನ: 

ಈ ಅಭಿಯಾನದಡಿಯಲ್ಲಿ, ಶಿಕ್ಷಣ ಸಂಸ್ಥೆಯ ಗಡಿ ಗೋಡೆಯಿಂದ 100 ಗಜಗಳಷ್ಟು ದೂರದಲ್ಲಿ ಹಳದಿ ರೇಖೆಯನ್ನು ಚಿತ್ರಿಸಲಾಗುವುದು, ಇದು ತಂಬಾಕು ಮುಕ್ತ ವಲಯವನ್ನು ಸೂಚಿಸುತ್ತದೆ. ಶಾಲೆಗಳು ಮತ್ತು ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳ ಮಾರಾಟವನ್ನು ತಡೆಗಟ್ಟಲು ಯೆಲ್ಲೋ ಲೈನ್ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಶಾಲೆಯ 100 ಗಜಗಳ ಒಳಗೆ ಯಾವುದೇ ತಂಬಾಕು ಉತ್ಪನ್ನಗಳು ಲಭ್ಯವಿಲ್ಲ ಎಂದು ಖಚಿತಪಡಿಸಿ ನಿಯಮಿತ ದಾಳಿ ಮತ್ತು ತಪಾಸಣೆ ಮೂಲಕ ಈ ಸ್ಥಿತಿಯನ್ನು ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಜಾಗರೂಕತೆಯನ್ನು ವಹಿಸಲಾಗಿದೆ.  

ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯ ನಿಯಮಗಳನ್ನು ಬಲಪಡಿಸುವುದು ಮತ್ತು ತಂಬಾಕಿನ ಭೀಕರ ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇಲ್ಲಿ ತಂಬಾಕು ಉತ್ಪನ್ನವನ್ನು ಮಾರಾಟ ಮಾಡಲು ಅಥವಾ ಬಳಸಲು ಯಾರಿಗೂ ಅವಕಾಶವಿರುವುದಿಲ್ಲ.  

ಈ ಅಭಿಯಾನವು ತಂಬಾಕು ಮುಕ್ತ ಸಂಸ್ಥೆಗಳನ್ನು ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

 ಗುಲಾಬಿ ಅಭಿಯಾನ : 

ಯಾವುದೇ ಶಿಕ್ಷಣ ಸಂಸ್ಥೆಯ 100 ಗಜಗಳ ಒಳಗೆ ತಂಬಾಕು ಮಾರಾಟ ಮಾಡದಿರುವ ಬಗ್ಗೆ ಪಾಯಿಂಟ್ ಆಫ್ ಸೇಲ್ ಮಾಲೀಕರು ಮತ್ತು ಸಾರ್ವಜನಿಕರಿಗೆ ಅರಿವು ನೀಡಲು ವಿದ್ಯಾರ್ಥಿ ಮತ್ತು ಶಿಕ್ಷಕ ಸಮುದಾಯದ ನೇತೃತ್ವದ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳ ಚಳುವಳಿ .

ಉದ್ದೇಶಗಳು :

  • ಶಿಕ್ಷಣಸಂಸ್ಥೆಗಳ 100 ಗಜಗಳ ಒಳಗೆ ತಂಬಾಕು ಮಾರಾಟ ಮಾಡುವ ತಂಬಾಕು ಮಾರಾಟಗಾರರಿಗೆ ತಂಬಾಕು ಸೇವನೆಯ  

   ದುಷ್ಪರಿಣಾಮಗಳು ಮತ್ತು COTPA ಸೆಕ್ಷನ್ 6 (ಬಿ)  ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು .

  • ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಜಾರಿಗೊಳಿಸಲು ಪರಿಸರವನ್ನು ಸಕ್ರಿಯಗೊಳಿಸುವುದು ಕಾಯ್ದೆ (COTPA) 2003, ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳಿಗೆ ಸೆಕ್ಷನ್ 6 (ಬಿ).

ಪ್ರಕ್ರಿಯೆ:

ವಿದ್ಯಾರ್ಥಿಗಳು ಜಾಥಾ ಮೂಲಕ ತಮ್ಮ ಶಿಕ್ಷಣ ಸಂಸ್ಥೆಯ 100 ಗಜಗಳ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ  ತಂಬಾಕು ಅಂಗಡಿಗಳಿಗೆ ಭೇಟಿ ನೀಡುವರು . ಅವರು ಕೆಂಪು ಗುಲಾಬಿಯನ್ನು ( ಪ್ರೀತಿ ಮತ್ತು ಗೌರವದ ಸಂಕೇತ ) ಮತ್ತು ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ ಅಭಿಯಾನದ ಉದ್ದೇಶಗಳ ಬಗ್ಗೆ ತಿಳಿಸುವ ಕರಪತ್ರಗಳನ್ನು ಹಸ್ತಾಂತರಿಸುತ್ತಾರೆ ಮತ್ತು ತಂಬಾಕು ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡದಂತೆ ವಿನಂತಿಸುತ್ತಾರೆ .

ತಂಬಾಕು ನಿಯಂತ್ರಣ ಕಾನೂನುಗಳ ಮೇಲ್ವಿಚಾರಣೆ :

ನಿಯಮಿತವಾದ ದಾಳಿ ತಂಬಾಕು ನಿಯಂತ್ರಣ ಕಾಯ್ದೆ (COTPA) 2003 ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೀಲಿಯಾಗಿದೆ. ತಂಬಾಕು ನಿಯಂತ್ರಣ ಕಾಯ್ದೆ (COTPA) 2003 ರ  ಉಲ್ಲಂಘನೆಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ನೆತೃತ್ವದ್ವದಲ್ಲಿ ಹಾಗೂ ತಾಲೂಕ ಮಟ್ಟದಲ್ಲಿ ಮಾನ್ಯ ತಹಶೀಲ್ದಾರವರ ನೆತೃತ್ವದಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡವನ್ನು ರಚಿಸಲಾಗಿದೆ. 2020-21 ನೇ ಸಾಲಿನ ROP ಪ್ರಕಾರ ಜಿಲ್ಲೆಯು ಪ್ರತಿ ಮಾಹೆ ಹಾಗೂ ತಾಲೂಕು ಪ್ರತಿ ವಾರಕ್ಕೊಮ್ಮೆ ಮುಖ್ಯ ಸಾರ್ವಜನಿಕ ಪ್ರದೆಶಗಳಲ್ಲಿ ದಾಳಿ ಕೈಗೊಳ್ಳಬೇಕಿದೆ. ಸ್ಕ್ವಾಡ್ ತಂಡದ ಸದಸ್ಯರೊಂದಿಗೆ ಹೊಂದಾಣಿಕೆಯಿಂದ ಡಿಟಿಸಿಸಿ ತಂಡವು ಯೋಜನೆಯ ಪ್ರಕಾರ ನಿಯಮಿತ ಜಾರಿ ಡ್ರೈವ್‌ಗಳನ್ನು ನಡೆಸಬೇಕಾಗಿದೆ.

ದಂಡದಿಂದ ಸಂಗ್ರಹಿಸಿದ ಮೊತ್ತವನ್ನು ಪ್ರತ್ಯೇಕ ಡಿಸಿ ಮತ್ತು ಡಿಎಚ್‌ಒ ಜಂಟಿ ಖಾತೆಗೆ ಜಮಾ ಮಾಡಬೇಕು [Ac: 32795515155, IFSC: SBIN0007225].   ಹೀಗೆ ಉತ್ಪತ್ತಿಯಾಗುವ ಹಣವನ್ನು ಜಿಲ್ಲೆಯ ತಂಬಾಕು ನಿಯಂತ್ರಣ ಉಪಕ್ರಮಗಳು ಅಥವಾ ಐಇಸಿ ಚಟುವಟಿಕೆಗಳಲ್ಲಿ ಮತ್ತಷ್ಟು ಬಳಸಿಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ.

ಜಿಲ್ಲೆಯಲ್ಲಿ 2018-19ನೇ ಸಾಲಿನಿಂದ ಜನವರಿ -2021 ರವರೆಗೆ ಡಿಟಿಸಿಸಿ ಮತ್ತು ಸ್ಕ್ವಾಡ್‌ಗಳು  ಕೊಟ್ಪಾ ನಿಯಮಗಳನ್ನು ಉಲ್ಲಂಘಿಸಿದ ಸಾರ್ವಜನಿಕ ಸ್ಥಳಗಳಲ್ಲಿ 120 ಬಾರಿ ಡ್ರೈವ್‌ಗಳನ್ನು ನಡೆಸಿದೆ .

 ದಾಳಿಗಳ ವರದಿ:

Monitoring of Tobacco Control Laws-kan

ತಂಬಾಕು ವ್ಯಸನ ಮುಕ್ತ ಕೇಂದ್ರ [ಟಿಸಿಸಿ]:

ತಂಬಾಕಿನಲ್ಲಿ ನಿಕೋಟಿನ್ ಇದ್ದು ಅದು ಹೆಚ್ಚು ವ್ಯಸನಕಾರಿ ವಸ್ತುವಾಗಿದೆ ಮತ್ತು ಇದು ದೀರ್ಘಕಾಲದ ನಿಕೋಟಿನ್ ಅವಲಂಬನೆಗೆ ಕಾರಣವಾಗುತ್ತದೆ. ಈ ಅವಲಂಬನೆಯನ್ನು ಹೋಗಲಾಡಿಸಲು, ತಂಬಾಕು ಬಳಕೆದಾರರಿಗೆ ತಂಬಾಕು ಬಳಕೆಯನ್ನು ಕ್ರಮೇಣ ತ್ಯಜಿಸಲು ಸಹಾಯ ಮತ್ತು ಸಮಾಲೋಚನೆಗಳ ಅಗತ್ಯವಿದೆ. ಹೀಗೆ, ತಂಬಾಕು ಬಳಕೆಯಿಂದ ಉಂಟಾಗುವ ಸಾವು ಮತ್ತು ನಮ್ಮನ್ನು ದುರ್ಬಲಗೊಳಿಸುವ ರೋಗವನ್ನು ಈ ವ್ಯಸನಮುಕ್ತ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಗಮನಾರ್ಹವಾಗಿ ಕಡಿಮೆ ಮಾಡಬಹುದು.

ತಂಬಾಕು ವ್ಯಸನ ಮುಕ್ತವು ತಂಬಾಕು ನಿಯಂತ್ರಣದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಪ್ರಸ್ತುತ ಬಳಕೆದಾರರಿಗೆ ತಂಬಾಕು ಬಳಕೆಯನ್ನು ವೈಜ್ಞಾನಿಕ ರೀತಿಯಲ್ಲಿ ತ್ಯಜಿಸಲು ಇದು ಸಹಾಯ ಮಾಡುತ್ತದೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಉಚಿತವಾಗಿ ತಂಬಾಕು ವ್ಯಸನಮುಕ್ತ ಸೇವೆ, ಆಪ್ತ ಸಲಹೆ, ಚಿಕಿತ್ಸೆ ಮತ್ತು ಇನ್ನಿತರ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರವನ್ನು ಸ್ಥಾಪಿಸಿದೆ. ಒಬ್ಬರು ಆಪ್ತ ಸಮಾಲೋಚಕರು / ಮನಶ್ಶಾಸ್ತ್ರಜ್ಞರು ತಂಬಾಕು ವ್ಯಸನಮುಕ್ತ ಕೇಂದ್ರದಲ್ಲಿ (ಟಿಸಿಸಿ) ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಎನ್‌ಪಿಸಿಡಿಸಿಎಸ್ ಕಾರ್ಯಕ್ರಮದಡಿ ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಆಪ್ತ ಸಮಾಲೋಚಕರು ತಂಬಾಕು ದುಷ್ಪರಿಣಾಮಗಳು ಮತ್ತು ಟಿಸಿಸಿ ಯಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ನಿಯಮಿತವಾಗಿ ಸಮಾಲೋಚನೆ ನೀಡುತ್ತಿದ್ದಾರೆ. ತಂಬಾಕು ತ್ಯಜಿಸಲು ಬಯಸುವವರು ಈ ಟಿಸಿಸಿ ಕೇಂದ್ರಕ್ಕೆ ಭೇಟಿ ನೀಡಿ ಔಷಧೀಯ ಚಿಕಿತ್ಸೆ/ಎನ್‌ಆರ್‌ಟಿ  ತೆಗೆದುಕೊಳ್ಳಬಹುದು  (ಅಗತ್ಯವಿದ್ದರೆ). ಸಚಿವಾಲಯವು ಟೋಲ್-ಫ್ರೀ ಸಂಖ್ಯೆ (1800-11-2356) ಮೂಲಕ ಸಮುದಾಯಕ್ಕೆ ತಂಬಾಕು ವ್ಯಸನಮುಕ್ತದ ಸಮಾಲೋಚನೆ ಸೇವೆಗಳನ್ನು ಒದಗಿಸಲು ರಾಷ್ಟ್ರೀಯ ತಂಬಾಕು ಕ್ವಿಟ್ ಲೈನ್ ಅನ್ನು ಪ್ರಾರಂಭಿಸಿದೆ.

TCC-Kan

ವಿವಿಧ ಇಲಾಖೆಗಳೊಂದಿಗೆ ಸಮನ್ವಯ:

ತಂಬಾಕು ಸೇವನೆಯು ದೇಹಕ್ಕೆ ಹೆಚ್ಚು ಹಾನಿಯನ್ನುಂಟುಮಾಡುತ್ತದೆ, ಇದಕ್ಕಾಗಿ COTPA ಕಾನೂನುಗಳ ಪರಿಣಾಮಕಾರಿ ಅನುಷ್ಠಾನದ ಜೊತೆಗೆ ಸಾಮಾಜಿಕ ಜಾಗೃತಿ ಅಗತ್ಯವಾಗಿರುತ್ತದೆ . ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ಕಡಿಮೆ ಮಾಡಲು ಅಂತರ ಇಲಾಖಾ ಸಮನ್ವಯದ ಅವಶ್ಯಕತೆಯಿದೆ . ಜನಜಾಗೃತಿ ಜೊತೆಗೆ ಕೋಟ್ಪಾ ಕಾಯ್ದೆಯ ನಿಯಮಗಳನ್ನು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ನೆತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮೀತಿಯು ಹಾಗೂ ಮಾನ್ಯ ತಹಶೀಲದಾರವರ ನೆತೃತ್ವದಲ್ಲಿ ತಾಲೂಕ ಮಟ್ಟದಲ್ಲಿ ತಾಲೂಕ ಸಮನ್ವಯ ಸಮೀತಿಯು ಕರ್ತವ್ಯ ನಿರ್ವಹಿಸುತ್ತಿದೆ.  

ತಂಬಾಕುವಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವದು ಹಾಗೂ ಕೋಟ್ಪಾ ಕಾಯ್ದೆಯ ನಿಯಮಗಳನ್ನು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನ ಮಾಡುವದು ಕೇವಲ ಆರೋಗ್ಯ ಇಲಾಖೆಯ ಪಾತ್ರವಲ್ಲ ಆದ್ದರಿಂದ ಎಲ್ಲ ಇಲಾಖೆಗಳು ಜಂಟಿಯಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಹಾಗೂ ಇಲಾಖಾವಾರು ಕೊಟ್ಪಾ ನಿಯಮಗಳ ಅನುಷ್ಠಾನವನ್ನು ಪರಿಶೀಲಿಸಲು ಈ ಸಮೀತಿಯು ಪ್ರತಿ 3 ತಿಂಗಳಿಗೊಮ್ಮೆ ಮಾನ್ಯ ಜಿಲ್ಲಾಧಿಕಾರಿಗಳ ನೆತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಮಾನ್ಯ ತಹಶೀಲದಾರವರ ನೆತೃತ್ವದಲ್ಲಿ ತಾಲೂಕ ಮಟ್ಟದಲ್ಲಿ ಸಭೆ ನಡೆಸುವದು ಹಾಗೂ ಇಲಾಖಾವಾರು ಕೊಟ್ಪಾ ನಿಯಮಗಳ ಅನುಷ್ಠಾನಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡುತ್ತದೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಜಿಲ್ಲಾ ಮಟ್ಟದ ಸಮನ್ವಯ ಸಮೀತಿ ಸಭೆಯನ್ನು ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳು ತಾಲೂಕ ಮಟ್ಟದಲ್ಲಿ ತಾಲೂಕ ಸಮನ್ವಯ ಸಮೀತಿ ಸಭೆಯನ್ನು ಆಯೋಜಿಸುತ್ತದೆ ಹಾಗೂ ಪ್ರತಿ ಸಭೆಗೆ ಹೊಸ ಅಜೆಂಡಾದೊಂದಿಗೆ ಸಭೆನಡೆಸಿ ಕೋಟ್ಪಾ ಕಾಯ್ದೆಯ ನಿಯಮಗಳನ್ನು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನ ಮಾಡಲು ಎದುರಿಸಿದ ಸಮಸ್ಯೆಗಳು ಹಾಗೂ ಅದರ ಪರಿಹಾರಗಳ ಬಗ್ಗೆ ಚರ್ಚಿಸಲಾಗುವದು.

ದಾಖಲೆಗಳು

ಕಾಯ್ದೆ / ನಿಯಮಗಳು:

Documents-Kan

ಕನ್ನಡ ಕರಪತ್ರ ಸ್ಕ್ಯಾನ್ ನಕಲು :

1.

                                                                            KANNADA POMPLET TOBACCO 

2. http://home.kar.nic.in/cotpa.html

1] ವಿಭಿನ್ನ ಎನ್‌ಟಿಸಿಪಿ ಮಾರ್ಗಸೂಚಿಗಳು ಮತ್ತು ಕೈಪಿಡಿಗಳು :

https://ntcp.nhp.gov.in/guidelines_manuals

2] ಶಿಕ್ಷಕರಿಗೆ ಮಾರ್ಗದರ್ಶಿ

https://cdn.s3waas.gov.in/s32b8a61594b1f4c4db0902a8a395ced93/uploads/2020/11/2020111162.pdf

3] ತಂಬಾಕು ಅವಲಂಬನೆ ಚಿಕಿತ್ಸೆಯ ಮಾರ್ಗಸೂಚಿಗಳು:

https://cdn.s3waas.gov.in/s3fa14d4fe2f19414de3ebd9f63d5c0169/uploads/2021/02/2021020630.pdf

ರಾಜ್ಯ ಮಟ್ಟದಲ್ಲಿ ಹೊರಡಿಸಿರುವ ಸುತ್ತೋಲೆಗಳು:

1.ಹೊಸ ಚಿತ್ರಾತ್ಮಕ ಆರೋಗ್ಯ ಎಚ್ಚರಿಕೆ:

https://cdn.s3waas.gov.in/s3fa14d4fe2f19414de3ebd9f63d5c0169/uploads/2021/02/2021020678.pdf

2.ಧೂಮರಹಿತ ತಂಬಾಕು, ಪಾನ್ಮಸಾಲಾ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧದ ಆದೇಶ :

https://cdn.s3waas.gov.in/s3fa14d4fe2f19414de3ebd9f63d5c0169/uploads/2021/02/2021020694.pdf

3.ಇ-ಸಿಗರೇಟ್ ಮತ್ತುಗೆಜೆಟೆಡ್ ಅಧಿಸೂಚನೆ ಕುರಿತು DO ಪತ್ರ

https://cdn.s3waas.gov.in/s3fa14d4fe2f19414de3ebd9f63d5c0169/uploads/2021/02/2021020654.pdf

 

ಜಿಲ್ಲಾ ಮಟ್ಟದಲ್ಲಿ ಹೊರಡಿಸಲಾದ ಸುತ್ತೋಲೆಗಳು:

1.ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ದಾಳಿ ಮಾಡುವ ಅಧಿಕೃತ ವ್ಯಕ್ತಿಗಳು :

https://cdn.s3waas.gov.in/s3fa14d4fe2f19414de3ebd9f63d5c0169/uploads/2021/02/2021020613.pdf

2. COTPA  ನಿಯಮಗಳನ್ನು ಅಳುವಡಿಸುವ ಕುರಿತು ಸೂತ್ತೋಲೆ:

https://cdn.s3waas.gov.in/s3fa14d4fe2f19414de3ebd9f63d5c0169/uploads/2021/02/2021020667.pdf

 

ವಿಳಾಸ
ತಂಬಾಕು ವ್ಯಸನ ಮುಕ್ತ ಕೇಂದ್ರ [ಟಿ.ಸಿ.ಸಿ]
ರೂಮ್ ನಂ. 8/3, ಬ್ಲಡ್ ಬ್ಯಾಂಕ ಹತ್ತಿರ, ಜಿಲ್ಲಾ ಆಸ್ಪತ್ರೆ
ವಿಜಯಪುರ 586102
ದೂರವಾಣಿ: 08352-271613