ಮುಚ್ಚಿ

ಜಿಲ್ಲಾ ಪಂಚಾಯತ

Rishi Anand IAS
ಶ್ರೀ. ರಿಷಿ ಆನಂದ್, ಭಾ.ಆ.ಸೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಜಿಲ್ಲಾ ಪಂಚಾಯತ್ ಕಚೇರಿಯ ಸುಗಮ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕಾಗಿ, “ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ” ಒಬ್ಬ ಅಧಿಕಾರಿಯನ್ನು ಆಡಳಿತ ನಡೆಸಲು ರಾಜ್ಯ ಸರ್ಕಾರವು ನೇಮಕ ಮಾಡಲಾಗಿದೆ. ಸುಮಾರು 27 ಇಲಾಖೆಗಳಾದ ಶಿಕ್ಷಣ, ಆರೋಗ್ಯ, ಅರಣ್ಯ, ಪಂಚಾಯತ ರಾಜ್ ಇಂಜಿನಿಯರಿಂಗ್, ನೀರಾವರಿ , ಮೀನುಗಾರಿಕೆ, ವ್ಯವಸಾಯ ಇತ್ಯಾದಿ ಜಿಲ್ಲಾ ಪಂಚಾಯತ್ ಅಡಿಯಲ್ಲಿವೆ. ಜಿಲ್ಲಾ ಪಂಚಾಯತದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಮತ್ತು ನೆರವು ನೀಡಲು ಈ ಕೆಳಗೆ ತಿಳಿಸಿದ ಹಿರಿಯ ಅಧಿಕಾರಿಯವರಿರುತ್ತಾರೆ –

  1. ಉಪ ಕಾರ್ಯದರ್ಶಿಗಳು
  2. ಮುಖ್ಯ ಲೆಕ್ಕಾಧಿಕಾರಿಗಳು
  3. ಮುಖ್ಯ ಯೋಜನಾ ಅಧಿಕಾರಿಗಳು
  4. ಯೋಜನಾ ನಿರ್ದೇಶಕರು

ಸ್ಥಳ

ಜಿಲ್ಲಾ ಪಂಚಾಯಿತಿ ಕಚೇರಿಯು ಮುಖ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿರುವ ಕನಕದಾಸ್ ಬಡಾವಣೆ ಸಮೀಪ ಮನಗೂಳಿ ರಸ್ತೆಯಲ್ಲಿದೆ. ಈ ಕಟ್ಟಡವನ್ನು 1998 ರಲ್ಲಿ KLAC ನಿರ್ಮಿಸಿದೆ. ಈ ಕಚೇರಿಯಿಂದ ಸುಲಭವಾಗಿ ಉಪವಭಾಗಾಧಿಕಾರಿಗಳ ಕಚೇರಿ, ತಹಸೀಲ್ದಾರ್ ಕಚೇರಿ, ಕೆಎಸ್ ಸಿಎಫ್ಸಿ, ಸಣ್ಣ ನೀರಾವರಿ, ಕೆಇಬಿ, ಜಿಲ್ಲಾ ನ್ಯಾಯಾಲಯ, ಗ್ರಾಮೀಣ ಬ್ಯಾಂಕ್ , ಬಿಡಿಎ ಇತ್ಯಾದಿಗಳನ್ನು ತಲುಪಬಹುದು.

ಜಿಲ್ಲಾ ಪಂಚಾಯಿತಿ ಕೆಲಸವನ್ನು ಈ ಕೆಳಗಿನ ವಿಭಾಗಗಳಾಗಿ ವಿಂಗಡಿಸಲಾಗಿದೆ:

  1. ಅಭಿವೃದ್ಧಿ ವಿಭಾಗ
  2. ಆಡಳಿತ ವಿಭಾಗ
  3. ಲೆಕ್ಕಗಳ ವಿಭಾಗ
  4. ಯೋಜನಾ ವಿಭಾಗ
  5. ಕೌನ್ಸಿಲ್ ವಿಭಾಗ