ಜಿಲ್ಲಾ ಕೌಶಲ್ಯ ಮಿಷನ್
ಬಹುಮಾನ:
ಪ್ರಥಮ ಬಹುಮಾನ – ರೂ. 5000
ದ್ವಿತೀಯ ಬಹುಮಾನ – ರೂ. 3000
ತೃತೀಯ ಬಹುಮಾನ – ರೂ. 1000
ಎಲ್ಲಾ ವಿಜೇತರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು.
ಲಾಂಛನ ಸಲ್ಲಿಸುವ ನಮೂನೆ :
- ಬಹುವರ್ಣದ್ದಾಗಿದ್ದು (ಏಕವರ್ಣ ಅಥವಾ ಕಪ್ಪು-ಬಿಳುಪು ಸ್ವೀಕರಿಸಲಾಗುವುದಿಲ್ಲ) ಕೈಯಿಂದ ರಚಿಸಿದ ಇಲ್ಲವೇ ಗಣಕೀಕೃತವಾಗಿ ವಿನ್ಯಾಸಗೊಂಡ ಲಾಂಛನವಾಗಿರಬೇಕು.
- PNG ಅಥವಾ JPG ನಮೂನೆಯಲ್ಲಿ ಮಾತ್ರ ಇರಬೇಕು ಮತ್ತು ಫೈಲ್-ಹೆಸರು ಚಿತ್ರದ ಅಡಿಬರಹವಾಗಿರಬೇಕು.
- ಅಡಿಬರಹ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಅಭಿವ್ಯಕ್ತಪಡಿಸಬಹುದು.
ಲಾಂಛನ ಸಲ್ಲಿಸುವ ವಿಧಾನ :
1) ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಯಸುವವರು ವಿನ್ಯಾಸಗೊಳಿಸಿದ ಲಾಂಛನವನ್ನು ಅದರ ಅಡಿಬರಹ, ಗರಿಷ್ಠ 50 ಶಬ್ದಗಳ ವಿವರ ಮತ್ತು ವೈಯಕ್ತಿಕ ವಿವರಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕೊನೆಯ ದಿನದೊಳಗಾಗಿ ಸಲ್ಲಿಸಬೇಕು:
ವಿಳಾಸ: ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ, ಸರಕಾರಿ ಐಟಿಐ ಆವರಣ,
ಸೋಲಾಪುರ ರೋಡ, ವಿಜಯಪುರ, ಕರ್ನಾಟಕ-586103.
ಮಾರ್ಗದರ್ಶಿ ನಿಯಮಗಳು:
- ಒಂದು ಸಮೂಹವಾಗಿ ಇಲ್ಲವೇ ವೈಯಕ್ತಿಕವಾಗಿ ಭಾಗವಹಿಸಬಹುದು.
- ಲಾಂಛನವು ಸ್ವಂತವಾಗಿ ರಚಿಸಿದ್ದಾಗಿರಬೇಕು.
- ಲಾಂಛನ ಕುರಿತು ವಿವರ ಗರಿಷ್ಠ ಸುಮಾರು 50 ಶಬ್ದಗಳಲ್ಲಿರಬೇಕು.
- ವಿನ್ಯಾಸಗಾರನ ಹೆಸರು, ದೂರವಾಣಿ, ವಯಸ್ಸು, ಇತೀಚಿನ ಭಾವಚಿತ್ರ, ಗುರುತಿನ ಚೀಟಿ(ಆಧಾರ, ಪ್ಯಾನ್ ಅಥವಾ ಮತದಾರರ ಗುರುತಿನ ಚೀಟಿ)ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
- ಜಿಲ್ಲಾ ಕೌಶಲ್ಯ ಮಿಷನ್ ಅತೀ ಹೆಚ್ಚು ಮೆಚ್ಚುಗೆ ಪಡೆದ ಮೊದಲ 3 ವಿನ್ಯಾಸಗಳನ್ನು ಆಯ್ಕೆ ಮಾಡಿ ಬೆಂಗಳೂರಿನ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (ಕೆಎಸ್‌ಡಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ಅಂತಿಮ ಅನುಮೋದನೆಗಾಗಿ ಕಳುಹಿಸುತ್ತದೆ.