ಮುಚ್ಚಿ

ಬಾರಾ ಕಮಾನ

ನಿರ್ದೇಶನ

ಫೋಟೋ ಗ್ಯಾಲರಿ

  • ಬಾರಾ ಕಮಾನ, ವಿಜಯಪುರ
    ಬಾರಾ ಕಮಾನ

ವಿಜಯಪುರದಲ್ಲಿ ನೂರಾರು ಸಮಾಧಿ ಕಟ್ಟಡಗಳಿವೆ. ಬಾದಶಹರು, ಸರದಾರರು, ಸಾಧು ಸಂತರು ಇತ್ಯಾದಿಯಾಗಿ ಎಲ್ಲರೂ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಸಮಾಧಿ ಕಟ್ಟಡಗಳನ್ನು ಕಟ್ಟಿಸಿಕೊಂಡಿದ್ದಾರೆ. ಅವುಗಳಲ್ಲಿ ಗೋಳಗುಮ್ಮಟ, ಇಬ್ರಾಹಿಮ ರೋಜಾ ಹಾಗೂ ಅಲಿ ರೋಜಾ ಅಥವಾ ಬಾರಾ ಕಮಾನ್ ವಾಸ್ತು ಶಿಲ್ಪಗಳು ಪ್ರಪಂಚದಲ್ಲಿಯೇ ಖ್ಯಾತಿಯನ್ನು ಗಳಿಸಿವೆ.
ಒಂದು ದಂತ ಕಥೆಯ ಪಕ್ರಾರ ಎರಡನೆಯ ಇಬ್ರಾಹಿಮ ಆದಿಲ್ ಶಹನು ಸೂಕ್ಷ್ಮ ಕೆತ್ತನೆ ಕಲಾ ಕುಸುರಿಯ ಕಟ್ಟಡ ಇಬ್ರಾಹಿಂ ರೋಜಾವನ್ನು ಕಟ್ಟಿದನು ಆತನ ಮಗ ಮಹ್ಮದ್ ಆದಿಲ್ ಶಹನಿಗೆ ಸೂಕ್ಷ್ಮತೆಯ ಕುಸುರಿ ಕೆಲಸಕ್ಕೆ ಅವಕಾಶವೆ ಇರಲಿಲ್ಲ. ಆದ್ದರಿಂದ ಅಪ್ಪನನ್ನು ಮೀರಿಸಬೇಕಾದರೆ ಭವ್ಯವಾದ ಅಷ್ಟೆ ಸರಳ ಗಾಂಭೀರ್ಯದ ಕಟ್ಟಡ ಗೋಳ ಗುಮ್ಮಟವನ್ನು ಕಟ್ಟಬೇಕಾಯಿತು. ಆತನ ಮಗ ಎರಡನೇಯ ಅಲಿ ಆದಿಲ್ ಶಾಹನು ಇವರಿಬ್ಬರನ್ನು ಮೀರಿಸುವ ಕಟ್ಟಡದ ಯೋಜನೆಯನ್ನು ಹಾಕಿ “ಅಲಿರೋಜಾ” ಕಟ್ಟಲು ಪ್ರಾರಂಭಿಸಿದನಂತೆ, ದೌರ್ಬಾಗ್ಯದಿಂದ ಅದು ಪೂರ್ತಿಯಾಗಲಿಲ್ಲ. ಅರೆ ಕೆಲಸಕ್ಕೆ ಪರ್ಯಾಯ ಶಬ್ದವಾಗಿ “ಬಾರಾಕಮಾನ್” ಆಯಿತು. ಕಟ್ಟಡದ ತಳಪಾಯ ಹಾಗೂ ಕಟ್ಟೋಣದ ಕ್ಷೇತ್ರವು ಗೋಳಗುಮ್ಮಟ್ಟಕ್ಕಿಂತ ದೊಡ್ಡದಾಗಿದೆ ಎಂಬುದನ್ನು ಊಹಿಸಿಕೊಂಡಾಗ ಕಟ್ಟಡ ಪೂರ್ತಿಗೊಂಡಿದ್ದರೆ ಪ್ರಪಂಚದಲ್ಲಿಯೇ ಅದೊಂದು ಅದ್ಭುತ ಕಟ್ಟಡವಾಗುತ್ತಿತ್ತು!

ತಲುಪುವ ಬಗೆ :

ವಿಮಾನದಲ್ಲಿ

ಗೋವಾ, ಪುಣೆ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ಸಮೀಪದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಬೆಳಗಾವಿ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ.

ರೈಲಿನಿಂದ

ಇಲ್ಲಿನ ರೈಲು ನಿಲ್ದಾಣವು ಬೆಂಗಳೂರು, ಮುಂಬೈ ಮತ್ತು ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ರಸ್ತೆ ಮೂಲಕ

ವಿಜಯಪುರವು ಬಸ್ ಮೂಲಕ ಇತರ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.