ಗೋಳಗುಮ್ಮಟ
ನಿರ್ದೇಶನಇಲ್ಲಿ ಸುಲ್ತಾನ ಮಹ್ಮದ ಆದಿಲಶಾಹನ ಸಮಾಧಿಯಂಟು. ಈ ಕಟ್ಟಡವು ಸನ್ 1626 ರಿಂದ 1656 ರ ವರೆಗೆ 30 ವರ್ಷಗಳ ಕಾಲದಲ್ಲಿ ಪೂರ್ತಿಗೊಂಡಿತು. ಇದರ ಎತ್ತರ 177 ಪೂಟು 4 ಇಂಚು, ಗುಮ್ಮಟದ ಸುತ್ತಳತೆ 144 ಫೂಟಿನದಾಗಿದೆ. ಈ ಗುಮ್ಮಟದಲ್ಲಿ 7 ಸಲ ಪ್ರತಿಧ್ವನಿಯಾಗುತ್ತದೆ. ಈ ಕಟ್ಟಡವನ್ನು ಮಲಿಕ ಸಂದಲ ಇರಾನ ಇವರ ಮಾರ್ಗದಶರ್ನದಲ್ಲಿ ಕಟ್ಟಿಸಲಾಗಿದೆ.
ತಲುಪುವ ಬಗೆ :
ವಿಮಾನದಲ್ಲಿ
ಗೋವಾ, ಪುಣೆ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ಸಮೀಪದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಬೆಳಗಾವಿ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ.
ರೈಲಿನಿಂದ
ಇಲ್ಲಿನ ರೈಲು ನಿಲ್ದಾಣವು ಬೆಂಗಳೂರು, ಮುಂಬೈ ಮತ್ತು ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
ರಸ್ತೆ ಮೂಲಕ
ವಿಜಯಪುರವು ಬಸ್ ಮೂಲಕ ಇತರ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.