ಮುಚ್ಚಿ

ಇಬ್ರಾಹಿಂ ರೋಜಾ

ನಿರ್ದೇಶನ

ಫೋಟೋ ಗ್ಯಾಲರಿ

  • ಇಬ್ರಾಹಿಂ ರೋಜಾದ  ಮುಂಭಾಗದ ನೋಟ ವಿಜಯಪುರ
    ಇಬ್ರಾಹಿಂ ರೋಜಾದ ಮುಂಭಾಗದ ನೋಟ
  • ಇಬ್ರಾಹಿಂ ರೋಜಾ ಒಳಗಿನ ನೋಟ ವಿಜಯಪುರ
    ಇಬ್ರಾಹಿಂ ರೋಜಾ ಒಳಗಿನ ನೋಟ
  • ಇಬ್ರಾಹಿಂ ರೋಜಾದಲ್ಲಿ ಮುಂಭಾಗದ ಸಮಾಧಿಯ ಬಾಹ್ಯ ನೋಟ ವಿಜಯಪುರ
    ಇಬ್ರಾಹಿಂ ರೋಜಾದಲ್ಲಿ ಮುಂಭಾಗದ ಸಮಾಧಿಯ ಬಾಹ್ಯ ನೋಟ

ಎರಡನೇ ಇಬ್ರಾಹಿಂ ಆದಿಲ್ ಶಹಾನ ಸಮಾಧಿ ಮತ್ತು ಮಸೀದಿಗಳಿರುವ ಈ ಅದ್ಭುತ ಅವಳಿ ಕಟ್ಟಡಗಳು, ವಿಜಯಪುರ ನಗರದ ಪಶ್ಚಿಮ ಭಾಗದ ಹೊರವಲಯದಲ್ಲಿದೆ. ಕುಶಲ ಶಿಲ್ಪದ ಮಿನಾರುಗಳಿಂದ ಆವೃತವಾದ ಈ ಕಟ್ಟಡಗಳ ಶಿಲ್ಪ ಸೌಂದರ್ಯ ವರ್ಣನಾತೀತ. ಅತ್ಯುಚ್ಚಮಟ್ಟದ ಶಿಲಾ ಕುಸುರಿ ಕೆಲಸವನ್ನು ದಾಖಲಿಸಿರುವ ಇಬ್ರಾಹಿಂ ರೋಜಾ ಇಡೀ ಭಾರತದಲ್ಲಿಯೊ ಅತ್ಯಂತ ಪ್ರಮಾಣಬದ್ಧವಾಗಿ ನಿರ್ಮಿಸಲಾದ ಇಸ್ಲಾಂ ಸ್ಮಾರಕಗಲಲ್ಲೊಂದು ಎಂಬ ಹೆಗ್ಗಳಿಕೆ ಪಡೆದ ಕಟ್ಟಡ. ವಿಶ್ವವಿಖ್ಯಾತ ತಾಜ್ ಮಹಲ್ನ ನಿರ್ಮಾಣಕ್ಕೆ ಸ್ಫೂತಿ ನೀಡಿದ ಕಟ್ಟಡ ಎಂದೂ ಇದಕ್ಕೆ ಖ್ಯಾತಿ. ಇದರ ಮುಂದಿರುವ ಮಸೀದಿ ಕೂಡ ಅಪಾರ ಸೌಂದರ್ಯದ ಖನಿ. ಐದು ಘನವಾದ ಪ್ರಬಾವಗಳಿಂದ ಕೂಡಿದ, ಶಿಲ್ಪಕಲೆಯ ಸಾರ ಸರ್ವಸ್ವವನ್ನು ಹೇರಿಕೊಂಡ ಶಿಲಾಘಲಕಗಳನ್ನು ಹೊಂದಿದ ಈ ಕಟ್ಟಡ ತನ್ನ ಅನುಪಮ ವಿನ್ಯಾಸ ಮತ್ತು ಸೌಂದರ್ಯದಿಂದ ನೋಡುಗರ ಮನ ಸೆಳೆಯುತ್ತಿದೆ. ಎತ್ತರವಾದ ಕಲ್ಲಿನ ವೇದಿಕೆಯ ಮೇಲೆ ಕಟ್ಟಲಾಗಿರುವ ಈ ನಿರ್ಮಾಣಗಳು ನಾಲ್ಕು ಮಿನಾರುಗಳನ್ನೊಳಗೊಂಡ ಸುಂದರವಾದೊಂದು ಗೋಪುರದಿಂದಾವೃತವಾಗಿದ್ದು ಸುತ್ತ ಸುಂದರವಾದ ಉದ್ಯಾನವನ್ನು ಹೊಂದಿದೆ.

ವೀಕ್ಷಣೆ ಸಮಯ: ಬೆಳಿಗೆ 6 ರಿಂದ ಸಂಜೆ 6 ಗಂಟೆವರೆಗೆ.

ತಲುಪುವ ಬಗೆ :

ವಿಮಾನದಲ್ಲಿ

ಗೋವಾ, ಪುಣೆ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ಸಮೀಪದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಬೆಳಗಾವಿ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ.

ರೈಲಿನಿಂದ

ಇಲ್ಲಿನ ರೈಲು ನಿಲ್ದಾಣವು ಬೆಂಗಳೂರು, ಮುಂಬೈ ಮತ್ತು ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ರಸ್ತೆ ಮೂಲಕ

ವಿಜಯಪುರವು ಬಸ್ ಮೂಲಕ ಇತರ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.