ಪ್ರಮಾಣಪತ್ರಗಳು (ನಾಡಕಛೇರಿ)
ಕರ್ನಾಟಕ ಸರ್ಕಾರದ ಸೇವೆಗಳಾದ ಜಾತಿ, ಆದಾಯ ಪ್ರಮಾಣಪತ್ರಗಳು ಮತ್ತು ಸಾಮಾಜಿಕ ಭದ್ರತೆ ಯೋಜನೆಗಳನ್ನು ಮುಂಚೆ ತಾಲೂಕು ಮಟ್ಟದಲ್ಲಿ ನಾಗರಿಕರಿಗೆ ವಿತರಿಸಲಾಗುತ್ತಿತ್ತು. ನಾಗರಿಕರು ತಾಲೂಕು ಕಚೇರಿಯಲ್ಲಿ ಅಗತ್ಯವಿರುವ ಸೇವೆಗಳಿಗೆ ದಾಖಲೆಗಳೊಂದಿಗೆ ಲಿಖಿತ ಅರ್ಜಿಗಳನ್ನು ನೀಡಬೇಕಾಗಿತ್ತು, ನಂತರ ಇದನ್ನು ಕೈಯಾರೆ ಪ್ರಕ್ರಿಯೆಗೊಳಿಸಿ ಪರಿಶೀಲನೆಗಾಗಿ ಕ್ಷೇತ್ರ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿತ್ತು, ವರದಿಯನ್ನು ಪ್ರಕ್ರಿಯೆಗೊಳಿಸಿ ಅಂತಿಮ ಪ್ರಮಾಣಪತ್ರವನ್ನು ತಾಲ್ಲೂಕು ಕಚೇರಿಯ ತಹಸೀಲ್ದಾರ್ ಮೂಲಕ ನೀಡಲಾಗುತ್ತಿತ್ತು. ಈ ಪ್ರಕ್ರಿಯೆಯು ತೊಡಕಾಗಿತ್ತು ಮತ್ತು ದುಬಾರಿಯಾಗಿತ್ತು (ನಾಗರಿಕರು ತಾಲ್ಲೂಕು ಕಚೇರಿಗೆ ಎರಡು ಬಾರಿ ಪ್ರಯಾಣಿಸಬೇಕಾಗಿತ್ತು ಮತ್ತು ಸ್ಥಿತಿಯನ್ನು ತಿಳಿಯಲು ಸಹ ನಡುವೆ ಬರಬೇಕಾಗಿತ್ತು) ಮತ್ತು ಸಮಯ ತೆಗೆದುಕೊಳ್ಳುತ್ತಿತ್ತು.
ಮೇಲಿನ ಸಮಸ್ಯೆಗಳನ್ನು ಬಗೆಹರಿಸಲು, 2012 ರಲ್ಲಿ ಈ ಯೋಜನೆಯು ಕಂದಾಯ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಿದೆ. ಖಾಸಗಿ ಪಾಲುದಾರರಿಲ್ಲದ ಸರ್ಕಾರಿ ತಾಂತ್ರಿಕ ವ್ಯವಸ್ಥೆ ಒದಗಿಸುವ ಪಾರದರ್ಶಕ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ವಿಧಾನಗಳ ಮೂಲಕ ಹೋಬಳಿ ಮಟ್ಟದಲ್ಲಿ ನಾಗರಿಕರಿಗೆ ಸೇವೆಗಳನ್ನು ಲಭ್ಯಗೊಳಿಸುವುದು ಮುಖ್ಯ ಉದ್ದೇಶ. ಹೋಬಳಿ ಮಟ್ಟದಲ್ಲಿ ಈ ಕೇಂದ್ರಗಳನ್ನು ಅಟಲ್ ಜಿ ಜನಸ್ನೇಹಿ ಕೇಂದ್ರ ಎಂದು ಹೆಸರಿಸಲಾಗಿದೆ.
ರಾಜ್ಯದಾದ್ಯಂತ 777 ಹೋಬಳಿ ಕೇಂದ್ರಗಳಲ್ಲಿ 25.12.2012 ರಂದು ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಕೆಳಕಂಡ ಪ್ರಮಾಣಪತ್ರಗಳನ್ನು ಅಟಲ್ ಜಿ ಜನಸ್ನೇಹಿ ಕೇಂದ್ರದಿಂದ ಪಡೆಯಬಹುದು:
- ಜಾತಿ & ಆದಾಯ ಪ್ರಮಾಣ ಪತ್ರಗಳು
- ಜಾತಿ ಪ್ರಮಾಣ ಪತ್ರ(CAT-A)
- ಜಾತಿ ಪ್ರಮಾಣ ಪತ್ರ(SC/ST)
- ಮರುವಿವಾಹ ಪ್ರಮಾಣ ಪತ್ರ
- ನಿವಾಸಿ ಪ್ರಮಾಣ ಪತ್ರ
- ವಾಸ ಸ್ಥಳದ ಪ್ರಮಾಣ ಪತ್ರ
- ಟೆನೆನ್ಸಿ ಇಲ್ಲದ ಪ್ರಮಾಣ ಪತ್ರ
- ಕೃಷಿ ಕುಟುಂಬ ಸದಸ್ಯ ಪ್ರಮಾಣ ಪತ್ರ
- ಭೂ ರಹಿತ ಪ್ರಮಾಣ ಪತ್ರ
- ಸಣ್ಣ ಮತ್ತು ಮಾರ್ಜಿನಲ್ ರೈತ ಪ್ರಮಾಣ ಪತ್ರ
- ಕೃಷಿ ಕಾರ್ಮಿಕ ಪ್ರಮಾಣ ಪತ್ರ
- ಜಮೀನು ಹೊಂದಿರುವ ಪ್ರಮಾಣಪತ್ರ
- ನಂಬಿಕೆಗೆ ಅರ್ಹ ಪ್ರಮಾಣಪತ್ರ
- ಸಾಲ ತೀರಿಸುವ ಶಕ್ತಿಯ ಬಗ್ಗೆ ದೃಢೀಕರಣ ಪತ್ರ (ದಢೂತಿ ಪ್ರಮಾಣ ಪತ್ರ ಅಥವಾ ಸಾಲ್ವೆನ್ಸಿ ಪ್ರಮಾಣ ಪತ್ರ)
- ಕೃಷಿಕ ಪ್ರಮಾಣ ಪತ್ರ
- ಜನ ಸಂಖ್ಯೆ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಕೆನೆ ಪದರ ಅಲ್ಲದ ಪ್ರಮಾಣ ಪತ್ರ
- ಅನುಕಂಪದ ಆದಾಯ ಪ್ರಮಾಣಪತ್ರ
- ಒಬಿಸಿ ಪ್ರಮಾಣಪತ್ರ (ಕೇಂದ್ರೀಯ)
- ಜೀವಂತವಿರುವ ಕುಟುಂಬ ಸದಸ್ಯ ಪ್ರಮಾಣ ಪತ್ರ
- ಸರ್ಕಾರಿ ಕೆಲಸದಲ್ಲಿ ಇಲ್ಲದ ಪ್ರಮಾಣ ಪತ್ರ
- ಜೀವಂತ ಪ್ರಮಾಣ ಪತ್ರ
- ನಿರುದ್ಯೋಗ ಪ್ರಮಾಣ ಪತ್ರ
- ವಿಧವಾ ಪ್ರಮಾಣ ಪತ್ರ
ಭೇಟಿ: http://nadakacheri.karnataka.gov.in/
ಜಿಲ್ಲಾಧಿಕಾರಿಗಳ ಕಛೇರಿ
ಸ್ಥಳ : ಅಟಲ್ ಜಿ ಜನಸ್ನೇಹಿ ಕೇಂದ್ರಗಳು | ನಗರ : ವಿಜಯಪುರ | ಪಿನ್ ಕೋಡ್ : 586101