ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮುಖ್ಯಸ್ಥರಾಗಿದ್ದಾರೆ. ಈ ಕಚೇರಿಯ ಬೇರೆ ಭೇರೆ ವಿಭಾಗಗಳನ್ನು ಹೊಂದಿದ್ದು ಮತ್ತು ಪ್ರತಿಯೊಂದು ವಿಭಾಗಕ್ಕೆ ಶೀರಸ್ತೆದಾರರು ಅಥವಾ ವ್ಯವಸ್ಥಾಪಕರಿದ್ದು ಅವರು ಸಂಬಂಧ ಪಟ್ಟ ತಮ್ಮ ವಿಭಾಗದಲ್ಲಿ ಕೆಲಸದ ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ನಿರ್ವಹಣೆಯನ್ನು ಜವಾಬ್ದಾರಿಯಿಂದಾ ನಿರ್ವಹಿಸುವರು. ವಿಭಾಗದ ಎಲ್ಲಾ ಕೆಲಸಗಳನ್ನು ಪ್ರಥಮ ದರ್ಜೇ ಸಹಾಯಕ ಮತ್ತು ದ್ವಿತೀಯ ದರ್ಜೇ ಸಹಾಯಕರಲ್ಲಿ ವಿಂಗಡಿಸಲಾಗಿದೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿವಿಧ ಕಛೇರಿಗಳು ಇದ್ದು ಜಿಲ್ಲಾಧಿಕಾರಿಗಳಿಗೆ ಕಾರ್ಯನಿರ್ವಹಣೆಯಲ್ಲಿ ಸಹಕಾರಿಯಾಗುವವು. ಈ ವಿವಿಧ ಕಚೇರಿಗಳಾವವು ಎಂದರೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ, ಶಿರಸ್ತೇದಾರ, ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳು.
ಆದಾಯ ಮನವಿಗಳು, ಕಂದಾಯ ಇತರೆ (ಕೆಎಲ್ಆರ್ ಆಕ್ಟ್, 1964), ಕೆಲವು ಲ್ಯಾಂಡ್ಸ್ ಪ್ರಕರಣಗಳ ವರ್ಗಾವಣೆ ನಿಷೇಧ (ಪಿಟಿಸಿಎಲ್ ಕಾಯ್ದೆ, 1978) ಮತ್ತು ಇನಾಮ್ ಪ್ರಕರಣಗಳು (ಇನಾಮ ನಿರ್ಮೂಲನೆ ಕಾಯಿದೆ) ಸಂಬಂಧಿಸಿದಂತೆ ಜಲ್ಲಾಧಿಕಾರಿಗಳು ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಾರೆ. ಈ ನ್ಯಾಯಾಲಯದ ವಿಭಾಗಕ್ಕೆ ನ್ಯಾಯಾಲಯದ ಪ್ರಕರಣಗಳ ನಿರ್ವಹಣೆಯನ್ನು ಮಾಡಲು ಒಬ್ಬ ದ್ವಿತೀಯ ದರ್ಜೇ ಸಹಾಯಕ ಮತ್ತು ವ್ಯವಸ್ಥಾಪಕರನ್ನು ಹೊಂದಿದೆ.