ಜಿಲ್ಲಾ ಪಂಚಾಯತ್ ಕಚೇರಿಯ ಸುಗಮ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕಾಗಿ, “ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ” ಒಬ್ಬ ಅಧಿಕಾರಿಯನ್ನು ಆಡಳಿತ ನಡೆಸಲು ರಾಜ್ಯ ಸರ್ಕಾರವು ನೇಮಕ ಮಾಡಲಾಗಿದೆ. ಸುಮಾರು 27 ಇಲಾಖೆಗಳಾದ ಶಿಕ್ಷಣ, ಆರೋಗ್ಯ, ಅರಣ್ಯ, ಪಂಚಾಯತ ರಾಜ್ ಇಂಜಿನಿಯರಿಂಗ್, ನೀರಾವರಿ , ಮೀನುಗಾರಿಕೆ, ವ್ಯವಸಾಯ ಇತ್ಯಾದಿ ಜಿಲ್ಲಾ ಪಂಚಾಯತ್ ಅಡಿಯಲ್ಲಿವೆ. ಜಿಲ್ಲಾ ಪಂಚಾಯತದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಮತ್ತು ನೆರವು ನೀಡಲು ಈ ಕೆಳಗೆ ತಿಳಿಸಿದ ಹಿರಿಯ ಅಧಿಕಾರಿಯವರಿರುತ್ತಾರೆ –
- ಉಪ ಕಾರ್ಯದರ್ಶಿಗಳು
- ಮುಖ್ಯ ಲೆಕ್ಕಾಧಿಕಾರಿಗಳು
- ಮುಖ್ಯ ಯೋಜನಾ ಅಧಿಕಾರಿಗಳು
- ಯೋಜನಾ ನಿರ್ದೇಶಕರು
ಸ್ಥಳ
ಜಿಲ್ಲಾ ಪಂಚಾಯಿತಿ ಕಚೇರಿಯು ಮುಖ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿರುವ ಕನಕದಾಸ್ ಬಡಾವಣೆ ಸಮೀಪ ಮನಗೂಳಿ ರಸ್ತೆಯಲ್ಲಿದೆ. ಈ ಕಟ್ಟಡವನ್ನು 1998 ರಲ್ಲಿ KLAC ನಿರ್ಮಿಸಿದೆ. ಈ ಕಚೇರಿಯಿಂದ ಸುಲಭವಾಗಿ ಉಪವಭಾಗಾಧಿಕಾರಿಗಳ ಕಚೇರಿ, ತಹಸೀಲ್ದಾರ್ ಕಚೇರಿ, ಕೆಎಸ್ ಸಿಎಫ್ಸಿ, ಸಣ್ಣ ನೀರಾವರಿ, ಕೆಇಬಿ, ಜಿಲ್ಲಾ ನ್ಯಾಯಾಲಯ, ಗ್ರಾಮೀಣ ಬ್ಯಾಂಕ್ , ಬಿಡಿಎ ಇತ್ಯಾದಿಗಳನ್ನು ತಲುಪಬಹುದು.
ಜಿಲ್ಲಾ ಪಂಚಾಯಿತಿ ಕೆಲಸವನ್ನು ಈ ಕೆಳಗಿನ ವಿಭಾಗಗಳಾಗಿ ವಿಂಗಡಿಸಲಾಗಿದೆ:
- ಅಭಿವೃದ್ಧಿ ವಿಭಾಗ
- ಆಡಳಿತ ವಿಭಾಗ
- ಲೆಕ್ಕಗಳ ವಿಭಾಗ
- ಯೋಜನಾ ವಿಭಾಗ
- ಕೌನ್ಸಿಲ್ ವಿಭಾಗ